ಪತ್ರಕರ್ತರ ಕಷ್ಟ ಕಾಲದ ನೆರವಿಗಾಗಿ ಆರಂಭವಾದ ಪಯಣ — 1949 ರಿಂದ ಇಂದಿನವರೆಗೆ.
ಪತ್ರಿಕೋದ್ಯಮದಂತಹ ಅನಿಶ್ಚಿತ ವೃತ್ತಿಯಲ್ಲಿ ದುಡಿಯುವ ಪತ್ರಕರ್ತರಿಗೆ ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಸಾಲ ಮತ್ತು ಗೃಹ ನೆರವಿನಂತಹ ಸೌಲಭ್ಯ ಒದಗಿಸಬೇಕು ಎಂಬ ಉದ್ದೇಶದಿಂದ, 1949ರಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಸ್ಥಾಪಿಸಲಾಯಿತು.
ಕೇವಲ ₹353.12 ದುಡಿಯುವ ಬಂಡವಾಳದೊಂದಿಗೆ ಆರಂಭವಾದ ಸಂಘ, ಇಂದು ₹10 ಕೋಟಿಗೂ ಮೀರಿದ ದುಡಿಯುವ ಬಂಡವಾಳ ಹೊಂದಿದೆ. ನಿರಂತರವಾಗಿ ನಿವ್ವಳ ಲಾಭ ಗಳಿಸುತ್ತಿರುವ ಸಂಘ, ಸಹಕಾರಿ ಸಂಘಗಳ ಆಡಿಟ್ ವರ್ಗೀಕರಣದಲ್ಲಿ ನಿರಂತರವಾಗಿ 'ಎ' ಶ್ರೇಣಿಯನ್ನು ಪಡೆದು ಮುನ್ನಡೆಯುತ್ತಿದೆ.
ಪ್ರತಿ ವರ್ಷ ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅಂತಹ ಮಕ್ಕಳಿಗೆ ಪ್ರೋತ್ಸಾಹ ಮತ್ತು ಸ್ಮರಣಿಕೆ ವಿತರಣೆ ಮಾಡಲಾಗುತ್ತದೆ. ಪ್ರಕೃತಿ ವಿಕೋಪ ಸಂದರ್ಭದಂತಹ ಸಂತ್ರಸ್ತ ಸದಸ್ಯರ ಕುಟುಂಬಗಳಿಗೆ ನೆರವು ನೀಡುವಲ್ಲಿಯೂ ಸಂಘ ಮುಂದಿದೆ.
ಪ್ರಸಕ್ತ ಆಡಳಿತ ಮಂಡಳಿ 2023ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಶ್ರಮಿಸುತ್ತಿದೆ. ಪತ್ರಕರ್ತರ ಕುಟುಂಬದ ಸದಸ್ಯರ ಮದುವೆ, ನಾಮಕರಣ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರದ ಕಡೆಯಿಂದ ಸೂಕ್ತ ಜಮೀನು ಪಡೆಯಲು ಶ್ರಮವಹಿಸಲಾಗುತ್ತಿದೆ.
ಇದೀಗ ಸಂಘವು 75ನೇ ವರ್ಷದ ಅಮೃತ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಭವಿಷ್ಯದಲ್ಲಿ ಪತ್ರಕರ್ತರ ಏಳಿಗೆಗಾಗಿ ಇನ್ನಷ್ಟು ವಿನೂತನ ಯೋಜನೆಗಳನ್ನು ರೂಪಿಸುವ ಗುರಿ ಹೊಂದಿದೆ.
ಸಂಘದ ವಾರ್ಷಿಕ ವಹಿವಾಟು, ದುಡಿಯುವ ಬಂಡವಾಳ, ಸದಸ್ಯರ ಸಂಖ್ಯೆ ಮತ್ತು ನಿವ್ವಳ ಲಾಭದ ವಿವರ.
| ಕ್ರ.ಸಂ | ಸಾಲು | ವಹಿವಾಟು (₹) | ದುಡಿಯುವ ಬಂಡವಾಳ (₹) | ಸದಸ್ಯರ ಸಂಖ್ಯೆ | ನಿವ್ವಳ ಲಾಭ (₹) | ಷೇರುಲಾಭಾಂಶ | ವರ್ಗೀಕರಣ |
|---|---|---|---|---|---|---|---|
| 1 | 2020-21 | 11,20,27,310.00 | 10,98,36,894.59 | 2629 | 43,63,562.81 | 9.00% | 'ಎ' |
| 2 | 2021-22 | 9,27,70,720.27 | 10,12,59,065.28 | 2633 | 20,53,409.90 | 4.50% | 'ಎ' |
| 3 | 2022-23 | 11,00,30,453.92 | 9,26,66,619.14 | 2636 | 49,24,711.75 | 7.00% | 'ಎ' |
| 4 | 2023-24 | 9,30,26,667.78 | 9,14,50,793.78 | 2642 | 32,59,378.03 | 7.00% | 'ಎ' |
| 5 | 2024-25 | 10,20,28,851.13 | 8,61,10,215.43 | 2664 | 65,14,533.13 | 7.00% | 'ಎ' |
| 6 | 2025-26 | 9,61,93,956.16 | 9,10,36,259.04 | 2699 | 66,04,477.21 | 7.00%* | 'ಎ' |
ಡಿಸೆಂಬರ್ 2023ರಲ್ಲಿ ಅಧಿಕಾರ ವಹಿಸಿಕೊಂಡ ಆಡಳಿತ ಮಂಡಳಿ, ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಈ ಕೆಳಗಿನ ಆದ್ಯತೆಗಳ ಮೇಲೆ ಗಮನ ಹರಿಸಿದೆ.